* ರೋಗ ಕಾರಕ ಜೀವಿ - ಫೈಟಾಪ್ಥೋರಾ ಮೀಡಿ
ಕೊಳೆ ರೋಗವು ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಕಂಡುಬರುತ್ತದೆ. ಈ ರೋಗವನ್ನು ಉಂಟುಮಾಡುವ ಜೀವಿಯು ಶಿಲೀಂದ್ರವಾಗಿದ್ದು ಸರಿಯಾದ ಸಮಯದಲ್ಲಿ ನಿರ್ವಹಣಾ ಕ್ರಮಗಳನ್ನು ಕೈಗೋಳ್ಳದಿದ್ದಲ್ಲಿ ಹೆಚ್ಚಿನ ಪ್ರಮಾಣದ ಹಾನಿಯನ್ನು ಉಂಟು ಮಾಡುತ್ತದೆ.
ರೋಗದ ಲಕ್ಷಣಗಳು :-
·ಗೋಚಲುಗಳು ಕಾಯಿಗಳ ಮೇಲೆ ಕಂದು ಬಣ್ಣದ ಶಿಲೀಂದ್ರದ ಬೆಳವಣಗೆ ಕಂಡು ಬರುತ್ತದೆ.
·ನಂತರ ಬಿಳಿ ಶಿಲೀಂಧ್ರದ ಬೆಳವಣಗೆ ಕಂಡು ಬಂದು ಕಾಯಿಗಳು ಕೋಳೆಯಲು ಪ್ರಾರಂಭಸುತ್ತದೆ.
·ಅಪಕ್ವ ಕಾಯಿಗಳು ಉದುರಿ ಗೋಂಚಲೆಲ್ಲಾ ಬೋಳು ಬೋಳಾಗಿ ಕಪ್ಪಾಗಿ ಕಾಣುತ್ತದೆ.
·ಗಿಡದ ಬೆಳವಣಿಗೆ ಕುಂಠಿತಗೊಂಡು ಇಳುವರಿಯಲ್ಲಿ ಹೆಚ್ಚಿನ ಹಾನಿ ಕಂಡು ಬರುತ್ತದೆ.
·ಜೂನ್ ನಿಂದ ಸೆಪ್ಟೆಂಬರ್ ತಿಂಗಳುವರೆಗೆ ರೋಗಭಾದೆ ತೀವ್ರವಾಗಿರುತ್ತದೆ.
·ಸುಳಿಕೂಡ ಕೊಳೆಯುವುದು ಕಂಡು ಬರುತ್ತದೆ.
·ಮುಂದುವರಿದ ಲಕ್ಷಣಗಳು ಹೋಂಬಾಳೆಯಲ್ಲಿ ಕಂಡು ಬರುತ್ತದೆ.
·ರೋಗಕ್ಕೆ ತುತ್ತಾಗಿ ಉದುರಿದ ಕಾಯಿಗಳು ಲಘು ತೂಕದ್ದಾಗಿರುತ್ತದೆ ಮತ್ತು ಕೊಳೆತು ಹೋಗುವುದರಿಂದ ಅವನ್ನು ಜಗಿಯಲು ಉಪಯೋಗಿಸಲಾಗುವುದಿಲ್ಲ
ರೋಗಶಾಸ್ತ್ರ
·ಈ ಶಿಲೀಂದ್ರವು ಹಾಸ್ಟೋರಿಯಗಳ ಮೂಲಕ ಕಾಯಿಯಿಂದ ಅವಶ್ಯಕ ಪೋಷಕಾಂಶಗಳು ಪಡೆದುಕೊಂಡು ಬೆಳೆಯುತ್ತವೆ.
·ಸಂತಾನೋತ್ವತಿ ಸ್ಪೋರ್ ಗಳ ಮೂಲಕ ಆಗುತ್ತದೆ.ಈ ಸ್ಪೋರ್ (ಬೀಜಗಳು) ೪-೫ ವರ್ಷಗಳ ವರೆಗೆ ಸುಪ್ತಸ್ಥಿತಿಯಲ್ಲಿರುತ್ತವೆ.
ಹರಡುವಿಕೆ ಮತ್ತು ಉಳಿಯುವಿಕೆ
·ಮಳೆ ನೀರು ಮತ್ತು ಗಾಳಿಯಿಂದ ಈ ರೋಗವು ಹರಡುತ್ತದೆ. ಈ ಶಿಲಿಂದ್ರವು ಕಡಿಮೆ ಉಷ್ಣಾಂಶ ಮತ್ತು ಹೆಚ್ಚು ತೇವಾಂಶವಿರುವ ಜಾಗಗಳಲ್ಲಿ ಉತ್ತಮವಾಗಿ ಬೆಳೆಯುತ್ತದೆ.
·ಮದ್ಯಂತರ ಮಳೆ ಮತ್ತು ಸೂರ್ಯನ ಬಿಸಿಲು ,ಶಿಲೀಂದ್ರ ವೇಗವಾಗಿ ಬೆಳೆಯಲು ದಾರಿಮಾಡಿಕೊಡುತ್ತವೆ.
·ಮರಗಳನ್ನು ನಿಕಟವಾಗಿ ( ಹತ್ತಿರ ) ನೆಡುವುದರಿಂದ ಮತ್ತು ಕಣಿವೆಗಳಲ್ಲಿ ಬೆಳೆದಿರುವ ತೋಟಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
·ಈ ಶಿಲೀಂದ್ರವು ಅಡಿಕೆಯ ಜೊತೆಗೆ ಆಲೂಗಡ್ಡೆ , ಸೇಬು , ಕೊಕೊ , ನಿಂಬೆಕುಲದ ಗಿಡಗಳ, ಭೂತಾಳೆ ಬೆಳೆಗಳು ಆಶ್ರಯ ಪಡೆಯುತ್ತದೆ.
ಶಿಲೀಂಧ್ರ ಅಭಿವೃದ್ದಿಗೆ ಅನುಕೂಲಕರ ಸ್ಥಿತಿಗಳು
·ಶಿಲೀಂದ್ರ ಬೆಳವಣಿಗೆಗೆ ಪ್ರಶಸ್ಥವಾದ ಉಷ್ಣಾಂಶ ೧೮-೨೨ ಡಿಗ್ರಿ ಸೆಲ್ಸಿಯಸ್.
·ಸಾಪೇಕ್ಷ ಆದ್ರತೆಯು ೯೫% ಕ್ಕಿಂತ ಹೆಚ್ಚಿರಬೇಕು.
·ಈ ಶಿಲೀಂಧ್ರವು ಬೆಳೆಯಲ್ಲು ಅಪಕ್ವ ಕಾಯಿಗಳು ಸಮಂಜಾವಾಗಿರುತ್ತದೆ.
·ಹೆಚ್ಚು ಮಳೆ ಮತ್ತು ಮಧ್ಯಂತರ ಬಿಸಿಲು ಶಿಲೀಂದ್ರ ಬೆಳವಣೆಗೆಗೆ ಅಗತ್ಯವಾಗಿರುತ್ತದೆ.
ನಿರ್ವಹಣಾ ಕ್ರಮಗಳು
·ಅಡಿಕೆ ತೋಟವನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ರೋಗ ಪೀಡಿತವಾದ ಮರದ ಮೇಲ್ಬಾಗಗಳನ್ನು ಮತ್ತು ಉದುರಿರುವ ಕಾಯಿಗಳನ್ನು ಸಂಗ್ರಹಿಸಿ ನಾಶಪಡಿಸಬೇಕು.
·ಅಡಿಕೆ ಸಸಿಗಳನ್ನು ನಾಟಿ ಮಾಡುವಾಗ ಶಿಫಾರಸು ಮಾಡಿರುವ ಮರಗಳ ನಡುವಿನ ಅಂತರವನ್ನು ಕಾಯ್ದುಕೊಳ್ಳಬೇಕು.
·ಕೊಳೆ ರೋಗ ಮತ್ತು ಸುಳಿರೋಗಳನ್ನು ತಡೆಗಟ್ಟಲು ಶೇ. ೧ ರ ಬೋರ್ಡೋ ದ್ರಾವಣ ಅಥಾವ ೩ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಅಥಾವ ೨ಗ್ರಾಂ ಮೆಟ ಲಾಕ್ಸಿಲ್, ಮ್ಯಾಂಕೊಚೆಬ್ ೭೨ ಒಂದು ಲೀಟರ್ ನೀರಿನಲ್ಲಿ ಕರಗಿಸಿ, ಮಳೆಗಾಲ ಪ್ರಾರಂಭವಾಗುವುದಕ್ಕೆ ಮೊದಲು ಮತ್ತು ೩೦-೪೫ ದಿನಗಳ ನಂತರ ಇನ್ನೊಮ್ಮೆ ಸಿಂಪಡಿಸಬೇಕು.
·ಕಾಯಿಯ ಗೊಂಚಲನ್ನು ಮೊದಲು ಸಿಂಪಡಣೆಯ ನಂತರ ಪಾಲಿಥಿನ್ ಚೀಲದಿಂದ ಮುಚ್ಚಬೇಕು, ಇದರಿಂದ ರೋಗದ ಹರಡುವಿಕೆಯನ್ನು ತಡೆಗಟ್ಟಬಹುದು.
·ರೋಗ ಪಿಡಿತ ಮೇಲಿನ ಎಲೆಗಳನ್ನು ಕತ್ತರಿಸಿ ಸ್ವಚ್ಚಗೊಳಿಸಿ, ಆ ಭಾಗಕ್ಕೆ ಶೇ.೧ ಬೋರ್ಡೋ ದ್ರಾವಣವನನು ಅಥವಾ ಮೆಟಲಾಕ್ಸಿಲ್,
ಮ್ಯಾಂಕೊಜೆಬ್ ೭೨ , ೨ಗ್ರಾಂ ಪ್ರತಿ ಲೀ ನೀರಿನಲ್ಲಿ ಮಿಶ್ರ ಮಾಡಿ ಸುಳಿಜಾಗಕ್ಕೆ ಸುರಿಯಬೇಕು.